ಒ೦ಟಿಯಾಗಿರಬಯಸುತ್ತೇನೆ....!

ನಾನು ಒ೦ಟಿಯಾಗಿರಬಯಸುತ್ತೇನೆ
ಕಪ್ಪು ಕಾನನದಾಚೆ
ಬಟ್ಟ ಬಯಲಿನಲ್ಲಿ
ಎಲ್ಲರಿಗಿ೦ತ ದೂರ
ಗಾಳಿಯ ಸ್ಪರ್ಶಕ್ಕೆ ಅಲುಗಿದ
ಹುಲ್ಲಿನ ಮುಲುಕು
ಎಲೆಗಳ ನೀನಾದಕ್ಕೆ ಮನಚೆಲ್ಲಿ
ಅಲ್ಲಿ ನೀನಿರುತ್ತೀಯ
ಬಾವವಾಗಿ

ನಾನು ಒ೦ಟಿಯಾಗಿರಬಯಸುತ್ತೇನೆ
ಕತ್ತಲಲ್ಲಿ, ಎಲ್ಲಾ
ಸ್ತಬ್ಧವಾಗಿರುವಾಗ
ಕಿವಿಚೆಲ್ಲಿ ಹೃದಯಕ್ಕೆ

ರಕ್ತದ ಪುಳುಕಿಗೆ
ಅಲ್ಲಿ ನೀನಿರುತ್ತೀಯ
ಶಬ್ಧವಾಗಿ

ನಾನು ಒ೦ಟಿಯಾಗಿರಬಯಸುತ್ತೇನೆ
ನಿದ್ರೆಯಲ್ಲಿ
ಮುಸುಕು ಹೊದ್ದು
ರೆಪ್ಪೆ ಗಟ್ಟಿ ಅಪ್ಪಿಸಿಕೊ೦ಡು
ಅಲ್ಲಿ ನೀನಿರುತ್ತೀಯ
ಕನಸಾಗಿ.

ನಾನು ಒ೦ಟಿಯಾಗಿರಬಯಸುತ್ತೇನೆ
ಬೆಳಕ ಕಟ್ಟೆ ಒಡೆದು
ಕನಸು ಬರಿದಾಗುವ ಮುನ್ನ
ಸಾವಿನಲ್ಲಿ
ಅಲ್ಲಿ ನೀನಿರುತ್ತೀಯ
ನೆನಪಾಗಿ.

4 comments:

ಶಾಂತಲಾ ಭಂಡಿ (ಸನ್ನಿಧಿ) said...

ಚೆನ್ನಾಗಿದೆ, ಆದರೆ ಎಲ್ಲವೂ ನಕಾರತ್ಮಕ ನಿಲುವು ಹೊಂದಿದ ಕವಿತೆಗಳು ಎನ್ನಿಸಿದ್ದು ಸುಳ್ಳಲ್ಲ,
ಹೀಗೆಯೇ ಬರೆಯಿರಿ, ನೆನಪಾದ ಕನಸುಗಳು ಮತ್ತೆ ನನಸಾದಾವು.
ಮುಂದಿನ ಪೋಸ್ಟ್ ಎಲ್ಲಿ?

Proton said...
This comment has been removed by the author.
Proton said...

ಶಾ೦ತಲಾರವರೆ,
Thanks, ನಕರಾತ್ಮಕವಾದದ್ದನ್ನೆಲ್ಲ ಹೀಗೆ ಹೊರಗೆ ಹಾಕಿ ಸಕರಾತ್ಮಕವಾಗಿ ಜೀವಿಸುವುದೇ Proton!. ವೈಜ್ಞಾನಿಕವಾಗಿ ಕೂಡ, a neutron ejects an electron to become PROTON.

Enigma said...

good answer proton